ಐಪಿಎಲ್ 13 ರಿಂದ ಹೊರಬಿದ್ದ ಸನ್ ರೈಸರ್ಸ್ ಕ್ರಿಕೆಟಿಗ

ಗುರುವಾರ, 24 ಸೆಪ್ಟಂಬರ್ 2020 (10:47 IST)
ದುಬೈ: ಐಪಿಎಲ್ 13 ರ ಮೊದಲ ಪಂದ್ಯದಲ್ಲಿ ಸೋಲನುಭವಿಸಿ ಆಘಾತದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಸ್ಟ್ರೇಲಿಯಾ ಮೂಲದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಐಪಿಎಲ್ ನಿಂದಲೇ ಹೊರಬಿದ್ದಿದ್ದಾರೆ.


ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದರು. ಹೀಗಾಗಿ ಅರ್ಧದಲ್ಲೇ ಪೆವಿಲಿಯನ್ ಗೆ ಮರಳಬೇಕಾಯಿತು. ಇದೀಗ ಅವರು ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 13 ರಿಂದಲೇ ಹೊರಬಂದಿರುವುದಾಗಿ ಹೈದರಾಬಾದ್ ಘೋಷಿಸಿದೆ. ಅವರ ಬದಲಿಗೆ ಜೇಸನ್ ಹೋಲ್ಡರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ