ವಿದೇಶೀ ಲೀಗ್ ಗಳ ಫ್ರಾಂಚೈಸಿ ಹೆಸರು ಪ್ರಕಟಿಸಿದ ಮುಂಬೈ ಇಂಡಿಯನ್ಸ್
ಇದೀಗ ಎರಡೂ ಫ್ರಾಂಚೈಸಿಗಳಿಗೂ ಮುಂಬೈ ಇಂಡಿಯನ್ಸ್ ಹೆಸರು ಘೋಷಣೆ ಮಾಡಿದೆ. ದ.ಆಫ್ರಿಕಾದ ಕ್ಯಾಪ್ ಟೌನ್ ತಂಡದ ಮಾಲಿಕತ್ವ ಪಡೆದಿರುವ ಮುಂಬೈ ಇಂಡಿಯನ್ಸ್ ಈ ತಂಡಕ್ಕೆ ಎಂಐ ಕ್ಯಾಪ್ ಟೌನ್ ಎಂದು ನಾಮಕರಣ ಮಾಡಿದೆ. ಇನ್ನು, ಯುಎಇ ಲೀಗ್ ತಂಡಕ್ಕೆ ಎಂಐ ಎಮಿರೇಟ್ಸ್ ಎಂದು ಹೆಸರು ಘೋಷಣೆ ಮಾಡಿದೆ.
ಐಪಿಎಲ್ ಮಾದರಿಯಲ್ಲೇ ದ.ಆಫ್ರಿಕಾ ಕ್ರಿಕೆಟ್ ಲೀಗ್ ಕೂಡಾ ನಡೆಯಲಿದ್ದು, ಈ ಲೀಗ್ ನಲ್ಲಿ ಬಹುತೇಕ ತಂಡಗಳ ಮಾಲಿಕತ್ವ ಭಾರತೀಯ ಕಂಪನಿಗಳದ್ದೇ ಎನ್ನುವುದು ವಿಶೇಷ. ಮುಂದಿನ ವರ್ಷ ಜನವರಿಯಲ್ಲಿ ಲೀಗ್ ಗೆ ಚಾಲನೆ ಸಿಗಲಿದೆ.