ಐಪಿಎಲ್ 14: ಪಂಜಾಬ್ ಸೋಲಿಸಿದ ಚೆನ್ನೈ ಗೆಲುವಿನಾರಂಭ

ಶನಿವಾರ, 17 ಏಪ್ರಿಲ್ 2021 (09:19 IST)
ಮುಂಬೈ: ಕಿಂಗ್ಸ್ ಪಂಜಾಬ್ ವಿರುದ್ಧ ಐಪಿಎಲ್ 14 ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ದಾಖಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ.


ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಪಂಜಾಬ್ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಆಘಾತದಿಂದ ಚೇತರಿಸಿಕೊಳ್ಳದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಪಂಜಾಬ್ ಪರ ಶಾರುಖ್ ಖಾನ್ 47 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ 6 ವಿಕೆಟ್ ಕಳೆದುಕೊಂಡು 15.4 ಓವರ್ ಗಳಲ್ಲಿ 107 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಚೆನ್ನೈ ಪರ ಮೊಯಿನ್ ಅಲಿ 46, ಫಾ ಡು ಪ್ಲೆಸಿಸ್ 36 ರನ್ ಗಳಿಸಿದರು. ಇದರೊಂದಿಗೆ ಚೆನ್ನೈ ಮೊದಲ ಗೆಲುವು ದಾಖಲಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ