ಐಪಿಎಲ್ 14: ಡೆಲ್ಲಿ ವಿರುದ್ಧ ಗೆದ್ದ ರಾಜಸ್ಥಾನ್ ರಾಯಲ್ಸ್

ಶುಕ್ರವಾರ, 16 ಏಪ್ರಿಲ್ 2021 (08:42 IST)
ಮುಂಬೈ: ಐಪಿಎಲ್ 14 ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ತಂಡ ರೋಚಕವಾಗಿ 3 ವಿಕೆಟ್ ಗಳಿಂದ ಗೆದ್ದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ನಾಯಕ ಪಂತ್ 51 ರನ್ ಗಳಿಸಿದ್ದೇ ಗರಿಷ್ಠ ರನ್ ಸಾಧನೆ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಯಲ್ಸ್ ಗೆ ಡೇವಿಡ್ ಮಿಲ್ಲರ್ (ಅಜೇಯ 62), ಮತ್ತು ಕ್ರಿಸ್ ಮಾರಿಸ್ (36) ಅಮೋಘ ಆಟವಾಡಿ ಆಸರೆಯಾದರು. ಅಂತಿಮವಾಗಿ ರಾಯಲ್ಸ್ 2 ಎಸೆತ ಬಾಕಿ ಇರುವಂತೇ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಗೆಲುವು ದಾಖಲಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ