ಐಪಿಎಲ್ 14: ಹೈದರಾಬಾದ್ ಗೆ ಇಂದು ಕೋಲ್ಕೊತ್ತಾ ಸವಾಲು

ಭಾನುವಾರ, 11 ಏಪ್ರಿಲ್ 2021 (09:21 IST)
ಚೆನ್ನೈ: ಐಪಿಎಲ್ 14 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ಸವಾಲಾಗಲಿದೆ.


ಇಂದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಎರಡೂ ತಂಡಗಳೂ ಸಮಬಲರು. ಕಳೆದ ಸೀಸನ್ ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದವು. ಹೀಗಾಗಿ ಈ ಬಾರಿಯೂ ಅದೇ ಪೈಪೋಟಿ ನಿರೀಕ್ಷಿಸಲಾಗಿದೆ.

ಹೈದರಾಬಾದ್ ಗೆ ಬೌಲಿಂಗ್ ಜೊತೆಗೆ ನಾಯಕ ಡೇವಿಡ್ ವಾರ್ನರ್ ಶಕ್ತಿ. ಇತ್ತ ಕೋಲ್ಕೊತ್ತಾಗೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರ್ಪಡೆ ಹೊಸ ಹುಮ್ಮಸ್ಸು ನೀಡಿದೆ. ಇಂದಿನ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ರಿಂದ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್,  ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ