ಐಪಿಎಲ್ 14 ಗೆ ಇಂದಿನಿಂದ ಚಾಲನೆ

ಶುಕ್ರವಾರ, 9 ಏಪ್ರಿಲ್ 2021 (08:56 IST)
ಚೆನ್ನೈ: ದೇಶದೆಲ್ಲೆಡೆ ಕೊರೋನಾ ಭೀತಿ ಮನೆ ಮಾಡಿರುವ ಬೆನ್ನಲ್ಲೇ ಐಪಿಎಲ್ 14 ನೇ ಆವೃತ್ತಿಗೆ ಇಂದಿನಿಂದ ಚಾಲನೆ ಸಿಗಲಿದೆ.


ಇಂದು ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ಹಾಲಿ ಚಾಂಪಿಯನ್‍ ಮುಂಬೈ ಇಂಡಿಯನ್ಸ್‍ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.

ಈ ಬಾರಿ ಕೊರೋನಾ ಕಾರಣದಿಂದ ವೀಕ್ಷಕರು ಮೈದಾನಕ್ಕೆ ಬರಲು ಅವಕಾಶವಿಲ್ಲ. ಆದರೆ ಸ್ಟಾರ್ ಸ್ಪೋರ್ಟ್ಸ್‍ ಮತ್ತು ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಮಧ್ಯಾಹ್ನದ ಪಂದ್ಯಗಳು 3.30 ರಿಂದ ಮತ್ತು ರಾತ್ರಿಯ ಪಂದ್ಯಗಳು ಸಂಜೆ 7.30 ರಿಂದ ಆರಂಭವಾಗಲಿದೆ. ಕೊರೋನಾ ಕಾರಣದಿಂದ ಸೀಮಿತ ಮೈದಾನಗಳಲ್ಲಷ್ಟೇ ಪಂದ್ಯಗಳು ನಡೆಯುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ