ಮೊದಲ ಪಂದ್ಯದಲ್ಲೇ ಆರ್ ಸಿಬಿಗೆ ರೋಹಿತ್ ಬಳಗಕ್ಕೆ ಠಕ್ಕರ್ ಕೊಡುವ ತವಕ

ಶುಕ್ರವಾರ, 9 ಏಪ್ರಿಲ್ 2021 (08:59 IST)
ಚೆನ್ನೈ: ಐಪಿಎಲ್ 14 ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಪ್ರಬಲ ಮುಂಬೈ ಇಂಡಿಯನ್ಸ್ ಎದುರಾಳಿ. ಹೀಗಾಗಿ ಮೊದಲ ಪಂದ್ಯವನ್ನೇ ಗೆದ್ದು ದೈತ್ಯ ಸಂಹಾರಿಯಾಗುವ ಉತ್ಸಾಹದಲ್ಲಿ ಆರ್ ಸಿಬಿಯಿದೆ.


ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ಆರ್ ಸಿಬಿ ಚೇತೋಹಾರಿ ಪ್ರದರ್ಶನ ನೀಡಿತ್ತು. ಆದರೆ ಕೊನೆಯ ಹಂತದಲ್ಲಿ ಜಾರಿಬಿತ್ತು. ಆದರೆ ಮುಂಬೈಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಸದೃಢವಾಗಿದೆ.

ಇತ್ತ ಆರ್ ಸಿಬಿ ತಂಡಕ್ಕೂ ಗ್ಲೆನ್ ಮ್ಯಾಕ್ಸ್ ವೆಲ್ ಸೇರ್ಪಡೆ ಹೊಸ ಬೂಸ್ಟ್ ನೀಡಲಿದೆ. ಹಾಗಿದ್ದರೂ ವಿರಾಟ್ ಕೊಹ್ಲಿ-ಎಬಿಡಿ ವಿಲಿಯರ್ಸ್ ತಂಡದ ಬ್ಯಾಟಿಂಗ್ ಆಧಾರ ಸ್ತಂಬಗಳಾಗಿ ಮೆರೆಯಲಿದ್ದಾರೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ