ತನ್ನನ್ನು ‘ತಲಾ’ ಎಂದು ಕರೆಯುವುದರ ಬಗ್ಗೆ ಧೋನಿ ಪ್ರತಿಕ್ರಿಯೆ ಏನು ಗೊತ್ತಾ?

ಬುಧವಾರ, 4 ಮಾರ್ಚ್ 2020 (12:15 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಾಗಿನಿಂದ ಅಭಿಮಾನಿಗಳ ಪಾಲಿಗೆ ಎಂಎಸ್ ಧೋನಿ ‘ತಲಾ’ ಆಗಿಬಿಟ್ಟಿದ್ದಾರೆ. ಈ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?


ಈ ವರ್ಷದ ಐಪಿಎಲ್ ಅಭ್ಯಾಸಕ್ಕೆ ಸಿಎಸ್ ಕೆ ಪಾಳಯ ಸೇರಿಕೊಂಡಿರುವ ಧೋನಿ ತನ್ನನ್ನು ತಲಾ ಎಂದು ಕರೆಯುವ ಅಭಿಮಾನಿಗಳ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

‘ತಲಾ ಎಂದರೆ ಸಹೋರ ಎಂದು ಅರ್ಥ. ಹಾಗಾಗಿ ನನ್ನ ಪಾಲಿಗೆ ಇದು ಅಭಿಮಾನಿಗಳು ನೀಡುವ ಬಿರುದು, ಪ್ರೀತಿ, ಅಭಿಮಾನ. ಚೆನ್ನೈ ಅಥವಾ ದಕ್ಷಿಣ ಭಾರತದ ಯಾವುದೇ ಪ್ರದೇಶಕ್ಕೆ ಬಂದಾಗ ನನ್ನನ್ನು ತಲಾ ಎಂದೇ ಕರೆಯುತ್ತಾರೆ. ಯಾರಾದರೂ ನನ್ನ ತಲಾ ಎಂದು ಕರೆಯುತ್ತಿದ್ದರೆ ಅದು ಅವರು ನನ್ನ ಮೇಲಿಟ್ಟಿರುವ ಪ್ರೀತಿ ಗೌರವ ಹಾಗೆಯೇ ಅವರು ಸಿಎಸ್ ಕೆ ಅಭಿಮಾನಿಯಾಗಿರುತ್ತಾರೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ