ಕ್ರಿಸ್ ಗೇಲ್ ಯಾವತ್ತೂ ಪಾರ್ಟಿಯಲ್ಲೇ ಮುಳುಗಿರ್ತಾರೆ: ಕೆಎಲ್ ರಾಹುಲ್

ಗುರುವಾರ, 8 ಏಪ್ರಿಲ್ 2021 (13:41 IST)
ಮುಂಬೈ: ಕ್ರಿಸ್ ಗೇಲ್ ಯಾವಾಗಲೂ ಪಾರ್ಟಿಯಲ್ಲೇ ಮಜಾ ಮಾಡ್ತಿರ್ತಾರೆ. ಅವರು ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ಹೇಗೆ ನೀಡುತ್ತಾರೆ ಎಂಬುದೇ ಅಚ್ಚರಿಯ ವಿಷಯ ಎಂದು ಕಿಂಗ್ಸ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.


ಪಂಜಾಬ್ ಪರ ಆಡುವ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಪಾರ್ಟಿ ಪ್ರಿಯ. ಯಾವತ್ತೂ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದರೂ ಬ್ಯಾಟಿಂಗ್ ವಿಚಾರಕ್ಕೆ ಬಂದಾಗ ಬಿರುಗಾಳಿಯಂತೆ ಆಡುತ್ತಾರೆ. ಇದಕ್ಕೆ ನಾಯಕ ಕೆಎಲ್ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರ ಜೊತೆಗೆ ಈ ಬಾರಿ ಮತ್ತೆ ಆಡುವುದನ್ನು ಎದಿರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಇದರೊಂದಿಗೆ ರಾಹುಲ್ ಜೊತೆಗೆ ಕ್ರಿಸ್ ಗೇಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ