ಐಪಿಎಲ್ 14: ದುರಾದೃಷ್ಟವಂತ ಪಂಜಾಬ್-ಹೈದರಾಬಾದ್ ನಡುವೆ ಇಂದಿನ ಪಂದ್ಯ

ಬುಧವಾರ, 21 ಏಪ್ರಿಲ್ 2021 (09:32 IST)
ಮುಂಬೈ: ಐಪಿಎಲ್ 14 ರಲ್ಲಿ ದುರಾದೃಷ್ಟ ಹಿಂಬಾಲಿಸುತ್ತಿರುವ ಎರಡು ತಂಡಗಳೆಂದರೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್. ಇವೆರಡರ ಮಧ್ಯೆ ಗೆಲ್ಲುವವರು ಯಾರು ಎಂಬುದನ್ನು ನೋಡಲು ಇಂದಿನ ಪಂದ್ಯ ವೀಕ್ಷಿಸಬೇಕು.


ಕಿಂಗ್ಸ್ ಪಂಜಾಬ್ ಮತ್ತು ಹೈದರಾಬಾದ್ ನಡುವೆ ಇಂದಿನ ಪಂದ್ಯ ನಡೆಯಲಿದೆ. ಪಂಜಾಬ್ ಉತ್ತಮ ಮೊತ್ತ ಕಲೆ ಹಾಕುತ್ತಿದ್ದರೂ ಅದನ್ನು ಗೆಲುವಾಗಿ ಪರಿವರ್ತಿಸಲು ವಿಫಲವಾಗುತ್ತಿದೆ. ಇದರಿಂದಾಗಿ ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಟೀಕೆಗಳೂ ಕೇಳಿಬಂದಿವೆ. ಅದೆಲ್ಲದಕ್ಕೂ ಉತ್ತರ ಕೊಡಲು ರಾಹುಲ್ ಪಡೆಗೆ ಇಂದು ಉತ್ತಮ ಅವಕಾಶ.

ಅತ್ತ ಹೈದರಾಬಾದ್ ಗೂ ಇದೇ ಸ್ಥಿತಿ. ಎಲ್ಲಾ ಇದ್ದೂ ಅದನ್ನು ಜಯವಾಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ನಾಯಕ ಡೇವಿಡ್ ವಾರ್ನರ್ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಎರಡೂ ತಂಡಗಳೂ ಅಂಕಪಟ್ಟಿಯಲ್ಲಿ ಕೊನೆಯ ಎರಡು ಕ್ರಮಾಂಕದಲ್ಲಿವೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ