ಐಪಿಎಲ್ 14:ಚಾಂಪಿಯನ್ ಮುಂಬೈ ಪ್ಲೇ ಆಫ್ ಕನಸಿಗೆ ಕೊಳ್ಳಿ

ಶುಕ್ರವಾರ, 8 ಅಕ್ಟೋಬರ್ 2021 (09:16 IST)
ದುಬೈ: ಪ್ರತೀ ಐಪಿಎಲ್ ಕೂಟದಲ್ಲಿ ಮೊದಲನೆಯ ತಂಡವಾಗಿ ಪ್ಲೇ ಆಫ್ ಹಂತಕ್ಕೇರುತ್ತಿದ್ದ ಮುಂಬೈ ಇಂಡಿಯನ್ಸ್ ಗೆ ನಿನ್ನೆಯ ಕೋಲ್ಕೊತ್ತಾ ಗೆಲುವು ಪ್ಲೇ ಆಫ್ ಕನಸನ್ನು ಭಗ್ನಗೊಳಿಸಿದೆ.


ನಿನ್ನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆದ್ದ ಕೆಕೆಆರ್ ಮುಂಬೈ ಪ್ಲೇ ಆಫ್ ಕನಸನ್ನು ಭಗ್ನಗೊಳಿಸಿದೆ. 14 ಪಂದ್ಯಗಳಿಂದ 7 ಗೆಲುವು ಕಂಡಿರುವ ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದ್ದರೆ, ಮುಂಬೈ 13 ಪಂದ್ಯಗಳಿಂದ 6 ಗೆಲುವು ಕಂಡು ಆರನೇ ಸ್ಥಾನದಲ್ಲಿದೆ.

ಇಂದು ಮುಂಬೈ ಹೈದರಾಬಾದ್ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಮುಂಬೈ 171 ರನ್ ಗಳ ಅಂತರದಿಂದ ಗೆದ್ದರೆ ಮಾತ್ರ ಪ್ಲೇ ಆಫ್ ಹಂತಕ್ಕೇರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ‍್ಯದ ಮಾತು. ಹೀಗಾಗಿ ಮುಂಬೈ ಐಪಿಎಲ್ 14 ರಲ್ಲಿ ನಿರಾಶಾದಾಯಕ ಅಂತ್ಯ ಕಂಡಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ