ಐಪಿಎಲ್ 2022: ಲೀಗ್ ಪಂದ್ಯ ನಡೆಯಲಿರುವ ನಾಲ್ಕು ತಾಣಗಳು ಫೈನಲ್

ಗುರುವಾರ, 24 ಫೆಬ್ರವರಿ 2022 (09:40 IST)
ಮುಂಬೈ: ಐಪಿಎಲ್ 2022 ರ ಲೀಗ್ ಪಂದ್ಯಗಳು ನಡೆಯುವ ನಾಲ್ಕು ತಾಣಗಳನ್ನು ಬಿಸಿಸಿಐ ಫೈನಲ್ ಮಾಡಿದೆ.

ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗಲಿದೆ. ಮೇ 29 ರಂದು ಫೈನಲ್ ನಡೆಯುವ ಸಾಧ್ಯತೆಯಿದೆ. ಲೀಗ್ ಹಂತದಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.

ಲೀಗ್ ಹಂತದ ಪಂದ್ಯಗಳು ವಾಂಖೆಡೆ ಮೈದಾನ, ಡಿ ವೈ ಪಾಟೀಲ್ ಮೈದಾನ, ಬ್ರೆಬೋರ್ನ್ ಮೈದಾನ ಮತ್ತು ಎಂಸಿಎ ಮೈದಾನಗಳಲ್ಲಿ ಪಂದ್ಯ ನಡೆಯಲಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕೇವಲ ನಾಲ್ಕು ತಾಣಗಳಲ್ಲಿ ಬಯೋ ಬಬಲ್ ವಾತಾವರಣದಲ್ಲಿ ಪಂದ್ಯಗಳು ನಡೆಯಲಿವೆ. ಪ್ಲೇ ಆಫ್ ಪಂದ್ಯಗಳು ಅಹಮ್ಮದಾಬಾದ್ ನಲ್ಲಿ ನಡೆಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ