ಐಪಿಎಲ್: ಡೆಲ್ಲಿ ತಂಡದ ಪಾಲಾದ ಕಿಂಗ್ಸ್ ಇಲೆವೆನ್ ನಾಯಕ ಆರ್ ಅಶ್ವಿನ್

ಶುಕ್ರವಾರ, 8 ನವೆಂಬರ್ 2019 (10:07 IST)
ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ತನ್ನ ನಾಯಕ ರವಿಚಂದ್ರನ್ ಅಶ್ವಿನ್ ರನ್ನು ಬಿಟ್ಟುಕೊಟ್ಟಿದೆ. ಅಶ್ವಿನ್ ಈಗ ಡೆಲ್ಲಿ ತಂಡದ ಪಾಲಾಗಿದ್ದಾರೆ.


ಅಶ್ವಿನ್ ರನ್ನು ಡೆಲ್ಲಿಗೆ ಬಿಟ್ಟುಕೊಟ್ಟಿರುವ ಪಂಜಾಬ್ ತಂಡ ಕರ್ನಾಟಕ ಮೂಲದ ಸ್ಪಿನ್ನರ್ ಜೆ ಸುಚಿತ್ ರನ್ನು ಖರೀದಿ ಮಾಡಿದೆ. ಈ ಮೂಲಕ ಕಳೆದ ವರ್ಷ ಪಂಜಾಬ್ ನಾಯಕರಾಗಿ ವಿವಾದದ ಸುಳಿಯಲ್ಲಿದ್ದ ಅಶ್ವಿನ್ ಡೆಲ್ಲಿ ತಂಡದ ಪಾಲಾಗಿದ್ದಾರೆ.

ಮೂಲಗಳ ಪ್ರಕಾರ 1.5 ಕೋಟಿ ರೂ. ಗೆ ಅಶ್ವಿನ್ ರನ್ನು ಡೆಲ್ಲಿ ತಂಡ ಖರೀದಿ ಮಾಡಿದೆ ಎನ್ನಲಾಗಿದೆ. ಆದರೆ ಇತ್ತ ಪಂಜಾಬ್ ಅವರ ಬದಲಿಗೆ ಸುಚಿತ್ ರನ್ನು 20 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ