ಕೆಕೆಆರ್ ವಿರುದ್ಧ ಸಿಡಿದೆದ್ದ ಸ್ಪಿನ್ನರ್ ಕುಲದೀಪ್ ಯಾದವ್
ಕೆಲವೊಮ್ಮೆ ತಾನು ಗೆಲುವು ತಂದುಕೊಡಬಲ್ಲೆ ಎಂದೆನಿಸಿದರೂ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ತಾನು ಆಡುತ್ತೇನೆಯೋ, ಇಲ್ಲವೋ ಎಂಬುದೇ ಗೊತ್ತಿಲ್ಲ. ವ್ಯವಸ್ಥಾಪಕರು ಎರಡು ತಿಂಗಳಿಗಾಗಿ ತಯಾರಿ ಮಾಡಿಕೊಂಡು ಬರುತ್ತಾರೆ. ಆಟಗಾರರ ನಿಜ ಸಾಮರ್ಥ್ಯದ ಬಗ್ಗೆ ಇವರಿಗೆ ಗೊತ್ತೇ ಇರುವುದಿಲ್ಲ. ವಿದೇಶೀ ಕೋಚ್ ಇದ್ದರಂತೂ ಮುಗಿಯಿತು. ಅವರೊಂದಿಗೆ ಸಂವಹನವೂ ಕಷ್ಟ. ಈಗಿನ ಪರಿಸ್ಥಿತಿ ನೋಡಿದರೆ ನನ್ನ ಸಾಮರ್ಥ್ಯದ ಬಗ್ಗೆ ವ್ಯವಸ್ಥಾಪಕರಿಗೆ ನಂಬಿಕೆಯೇ ಇಲ್ಲ ಎನಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಅವರ ಈ ಆರೋಪಗಳಿಗೆ ಕೆಕೆಆರ್ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದುನೋಡಬೇಕಿದೆ.