ಅದರಲ್ಲೂ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಮತ್ತೊಮ್ಮೆ ಮಹತ್ವದ ಪಂದ್ಯದಲ್ಲಿ ತಂಡಕ್ಕೆ ಕೈಕೊಟ್ಟರು. ನಿನ್ನೆಯ ಪಂದ್ಯದಲ್ಲಿ ಸ್ಮೃತಿ ಬಿರುಸಿನ ಆಟಕ್ಕೆ ಕೈ ಹಾಕಿದ್ದರೆ ಭಾರತ ಕೊನೆಯ ಹಂತದಲ್ಲಿ ಒತ್ತಡಕ್ಕೊಳಗಾಗುತ್ತಿರಲಿಲ್ಲ. ಆದರೆ ಆಧಾರವಾಗಬೇಕಿದ್ದ ಸ್ಮೃತಿ ಟೆಸ್ಟ್ ಶೈಲಿಯಲ್ಲಿ ಬ್ಯಾಟ್ ಮಾಡಿದರು. 12 ಎಸೆತ ಎದುರಿಸಿ ಅವರು ಗಳಿಸಿದ್ದು ಕೇವಲ 6 ರನ್. ಬಳಿಕ ಔಟಾಗಿ ಪೆವಿಲಿಯನ್ ಸೇರಿಕೊಂಡರು.
ಇದರಿಂದ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ಸ್ಮೃತಿ ಕೇವಲ ಮೇಕಪ್ ಮಾಡಿಕೊಳ್ಳಲಿಕ್ಕಷ್ಟೇ ಲಾಯಕ್ಕು ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ. ಸೌಂದರ್ಯವೊಂದಿದ್ದರೆ ಸಾಲದು, ಕ್ರಿಕೆಟ್ ನಲ್ಲಿ ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ತಕ್ಕಂತೆ ಆಡಿದರೆ ಮಾತ್ರ ಬೆಲೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಮೃತಿ ಮಹತ್ವದ ಪಂದ್ಯದಲ್ಲಿ ಈ ರೀತಿ ಔಟಾಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಏಷ್ಯಾಕಪ್ ನಲ್ಲೂ ಇದೇ ರೀತಿ ಮಾಡಿದ್ದರು. ಹೀಗಾಗಿ ಕೆಲವರು ಸ್ಮೃತಿ ನೀವು ಮಹತ್ವದ ಪಂದ್ಯಗಳಲ್ಲಿ ಆಡದೇ ಇರುವುದು ಭಾರತಕ್ಕೆ ಒಳಿತು ಎಂದು ಕಿಡಿ ಕಾರಿದ್ದಾರೆ.