ಐಪಿಎಲ್ 14: ರೋಹಿತ್ ಕೈಗೆ ಏಟಾದರೆ ಕೊಹ್ಲಿಗೆ ಆತಂಕ!

ಸೋಮವಾರ, 27 ಸೆಪ್ಟಂಬರ್ 2021 (17:38 IST)
ದುಬೈ: ಐಪಿಎಲ್ 14 ರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇರೆ ಬೇರೆ ತಂಡದ ಪರ ಆಡುತ್ತಿರಬಹುದು. ಆದರೆ ಇಬ್ಬರ ನಡುವಿನ ಸ್ನೇಹ ಮಾತ್ರ ಕಡಿಮೆಯಾಗಿಲ್ಲ.
Photo Courtesy: Google


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಸಹ ಆಟಗಾರ ಇಶಾನ್ ಕಿಶನ್ ಹೊಡೆದ ಬಾಲ್ ರೋಹಿತ್ ಶರ್ಮಾ ಕೈಗೆ ತಗುಲಿತ್ತು. ಇದರಿಂದಾಗಿ ರೋಹಿತ್ ನೋವಿಗೊಳಗಾಗಿದ್ದರು. ಔಟಾಗಿ ಹೋದ ಮೇಲೆ ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು.

ರೋಹಿತ್ ಗೆ ಗಾಯವಾಗಿದ್ದು ವಿರಾಟ್ ಕೊಹ್ಲಿ ಚಿಂತೆಗೆ ಕಾರಣವಾಗಿತ್ತು. ಐಪಿಎಲ್ ಮುಗಿದ ಬಳಿಕ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ನಾಯಕರೂ ಆಗಿರುವ ಕೊಹ್ಲಿಗೆ ರೋಹಿತ್ ಗಾಯದ ಬಗ್ಗೆ ಚಿಂತೆಯಾಗಿತ್ತು. ಪಂದ್ಯದ ಬಳಿಕ ರೋಹಿತ್ ಬಳಿ ತೆರಳಿದ ಕೊಹ್ಲಿ ನಗೆ ಚಟಾಕಿ ಹಾರಿಸುತ್ತಾ ಆರೋಗ್ಯ ವಿಚಾರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ