Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಬೆಲೆ ಭಾರೀ ಏರಿಕೆ
ಕಳೆದ ನಾಲ್ಕೈದು ದಿನಗಳಿಂದ ಅಡಿಕೆ ಬೆಲೆ ಏರಿಕೆಯಾಗುತ್ತಿರುವುದು ಬೆಳೆಗಾರರಿಗೆ ಚೇತರಿಕೆ ತಂದಿದೆ. ಮೊನ್ನೆಯಿಂದ ಅಡಿಕೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇಂದು ಇದು ಮತ್ತಷ್ಟು ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 15 ರೂ. ಏರಿಕೆಯಾಗಿದ್ದು 495 ರೂ.ಗಳಾಗಿವೆ. ಹಳೆ ಅಡಿಕೆ ಬೆಲೆ 10 ರೂ. ಏರಿಕೆಯಾಗಿದ್ದು ಗರಿಷ್ಠ 520 ರೂ.ಗಳಷ್ಟಾಗಿದೆ. ಇಂದು ಡಬಲ್ ಚೋಲ್ ಬೆಲೆಯಲ್ಲೂ 10 ರೂ. ಏರಿಕೆಯಾಗಿದ್ದು 520 ರೂ.ಗಳಾಗಿವೆ.
ಹೊಸ ಫಟೋರ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 370 ರೂ.ಗಳಷ್ಟಿದೆ. ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 260 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಆದರೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಮಾತ್ರ ಮತ್ತೆ ನಿರಾಸೆಯಾಗಿದೆ. ಇಂದು ಮತ್ತೆ 10 ರೂ. ಇಳಿಕೆಯಾಗಿದ್ದು 655 ರೂ.ಗಳಾಗಿದೆ. ಇನ್ನು ಒಣಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 190 ರೂ.ಗಳಷ್ಟಾಗಿದೆ.