ಸೈನಿಕನ ವೇಷ ಹಾಕಿ OLXನಲ್ಲಿ ವಾಹನ ಸೇಲ್ ಗಿಟ್ಟು ಮೋಸ ಮಾಡುವವರಿದ್ದಾರೆ ಎಚ್ಚರಿಕೆ

ಮಂಗಳವಾರ, 29 ಜನವರಿ 2019 (08:23 IST)
ಬೆಂಗಳೂರು : OLXನಲ್ಲಿ ವಾಹನ ಸೇಲ್ ಗಿಡುವ ನೆಪದಲ್ಲಿ ವ್ಯಕ್ತಿಯೊಬ್ಬ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ಮಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.


ವಿಕಾಸ್ ಪಟೇಲ್ OLXನಲ್ಲಿ ಸೈನಿಕ ವೇಷ ಹಾಕಿ ಜನರಿಗೆ ಮೋಸ ಮಾಡಿದ ವ್ಯಕ್ತಿ. ಈತ ಬೆಂಗಳೂರಿನ ಆರ್ ಟಿಓ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ಗಾಡಿಯನ್ನು OLXನಲ್ಲಿ ಸೇಲ್ ಗಿಡುತ್ತಿದ್ದ. ಇದನ್ನು ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾದಾಗ ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಿದ್ದ. ಇದನ್ನು ನಂಬಿದ ಜನರು ಹಣ ಕಳಿಸಿದ ಬಳಿಕ ಆತ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.


ಇದೇರೀತಿಯಲ್ಲಿ ಆತ ಈಗಾಗಲೇ ಸಾಕಷ್ಟು ವಾಹನಗಳನ್ನು OLXನಲ್ಲಿ ಸೇಲ್‍ಗಿಟ್ಟು ಜನರಿಗೆ ಟೋಪಿ ಹಾಕಿದ್ದಾನೆ. ಸದ್ಯ ಆತನಿಂದ ವಂಚನೆಗೊಳಗಾದವರು ಆತನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ