ದಿನೇಶ್ ಗುಂಡೂರಾವ್ ಹಾಗೂ ಸಚಿವ ಅನಂತಕುಮಾರ್ ಹೆಗಡೆ ನಡುವೆ ಟ್ವೀಟ್ ವಾರ್

ಸೋಮವಾರ, 28 ಜನವರಿ 2019 (11:44 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಡುವೆ ವೈಯಕ್ತಿಕ ವಿಚಾರದ ಕುರಿತು ಟ್ವೀಟ್ ವಾರ್ ಶುರುವಾಗಿದೆ.


ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ ತಮ್ಮ ಭಾಷಣದಲ್ಲಿ ಹಿಂದೂ ಹುಡುಗಿ ಮುಟ್ಟುವ ಯುವಕನ ಕೈ ಇರಬಾರದು ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ದಿನೇಶ್ ಗುಂಡೂರಾವ್, ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನೀವು ನೀಡಿದ ಕೊಡುಗೆ ಏನು? ನಿಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ನೋಡಿದ್ರೆ ನನಗೆ ನೋವಾಗುತ್ತದೆ ಎಂದು ಟ್ವಿಟ್  ಮಾಡಿದ್ದರು.


ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅನಂತಕುಮಾರ್ ಹೆಗಡೆ, ನಾನು ಈ ವ್ಯಕ್ತಿಯ ಪ್ರಶ್ನೆಗಳಿಗೆ ಖಂಡಿತ ಉತ್ತರಿಸುತ್ತೇನೆ. ಮೊದಲು ನಿಮ್ಮ ಅಭಿವೃದ್ಧಿ ಕೆಲಸ, ಸಾಧನೆಯನ್ನು ತಿಳಿಸಿ. ನನಗೆ ಗೊತ್ತಿರುವ ಹಾಗೆ ಮುಸ್ಲಿಂ ಹುಡುಗಿ ಹಿಂದೆ ಓಡಿ ಹೋದವರು ನೀವು ಎಂದು ವೈಯಕ್ತಿಕವಾಗಿ ಟೀಕಿಸಿದ್ದಾರೆ.


ತಮ್ಮ  ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ದಿನೇಶ್ ಗುಂಡೂರಾವ್ ಅನಂತಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ್ದಾರೆ. ರಾಜಕೀಯ ನಾಯಕರು ಈ ರೀತಿ ಟ್ವೀಟರ್ ನಲ್ಲಿ ಕಚ್ಚಾಡುತ್ತಿರುವುದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಇದೀಗ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ