ಬೆಂಗಳೂರು : ಮಾವಿನ ಹಣ್ಣೆಂದರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗೇ ಮಕ್ಕಳು ಮಾವಿನ ಹಣ್ಣಿನಿಂದ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಂ ಎಲ್ಲಾ ತಿಂದಿರುತ್ತಾರೆ. ಅದಕ್ಕಾಗಿ ಅವರಿಗೆ ಸ್ಪೆಷಲ್ ಆಗಿರುವ ಮಾವಿನ ಹಣ್ಣಿನ ಲಡ್ಡು ಮಾಡಿ ಕೊಡಿ. ಮಕ್ಕಳು ತುಂಬಾ ಸಂತೋಷಪಡುತ್ತಾರೆ.
ಬೇಕಾಗುವ ಸಾಮಾಗ್ರಿಗಳು: 1. ಮಾವಿನ ಹಣ್ಣಿನ ತಿರುಳು- 1/2 ಕಪ್ 2. ತಣಿದ ಗಟ್ಟಿಯಾದ ಹಾಲು - 1/2 ಕಪ್ 3. ಒಣ ಕೊಬ್ಬರಿಯ ತುರಿ - 1 ಕಪ್ 4. ಏಲಕ್ಕಿ ಪುಡಿ - 1/4 ಚಮಚ 5. ಚಿಕ್ಕದಾಗಿ ಹೆಚ್ಚಿಕೊಂಡ ಮಿಶ್ರ ಡ್ರೈಪ್ರೂಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ)- 1/2 ಕಪ್
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು, ಒಣ ತೆಂಗಿನ ತುರಿಯನ್ನು ಹುರಿದುಕೊಳ್ಳಬೇಕು. ಪರಿಮಳ ಬರುವವರೆಗೆ ಹುರಿಯಬೇಕು. ನಂತರ ಮಾವಿನ ಹಣ್ಣಿನ ತಿರುಳನ್ನು ಹಾಕಿ ಮಿಶ್ರಗೊಳಿಸಿ. ಬಳಿಕ ಹಾಲು, ಡ್ರೈ ಪ್ರೂಟ್ಸ್, ಚಿಟಿಕೆಯಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲುಕಬೇಕು. ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು. ಹೀಗೆ ಮಾಡುತ್ತಾ ಇರುವಾಗ ದಪ್ಪ ಹಿಟ್ಟಿನ ಮುದ್ದೆಯಂತೆ ಆಗುತ್ತದೆ. ಆಗ ಗ್ಯಾಸ ನಿಂದ ಕೆಳಗಿಳಿಸಿ, ಆರಲು ಬಿಡಿ. 5. ಕೈಯಲ್ಲಿ ಹಿಡಿಯುವಷ್ಟು ಬಿಸಿಯಿರುವಾಗ ಸಣ್ಣ ಸಣ್ಣ ಉಂಡೆ(ಲಡ್ಡು)ಯನ್ನು ಮಾಡಿ. ನಂತರ ಇದರ ಮೇಲೆ ತೆಂಗಿನ ತುರಿಯನ್ನು ಉದುರಿಸಿದರೆ ಮಾವಿನ ಲಡ್ಡು ಸವಿಯಲು ಸಿದ್ಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ