ದಿನೇ ದಿನೇ ಇಳಿಕೆಯಾಗುತ್ತಿದೆ ಪೆಟ್ರೋಲ್-ಡೀಸೆಲ್ ಬೆಲೆ

ಸೋಮವಾರ, 29 ಅಕ್ಟೋಬರ್ 2018 (09:34 IST)
ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಇಳಿಕೆ ಮಾಡಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿನಿತ್ಯ ಕೊಂಚ ಮಟ್ಟಿಗೆ ಇಳಿಕೆಯಾಗುತ್ತಿದೆ.

ಕಳೆದ 12 ದಿನಗಳಿಂದ ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಣ್ಣ ಪ್ರಮಾಣದ ಇಳಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 79.75 ರೂ.ಗೆ ಬಂದು ನಿಂತಿದೆ. ಬೆಲೆ ಏರಿಕೆಯಾಗುತ್ತಿದ್ದ ದಿನಗಳಲ್ಲಿ ಇದು 90 ರೂ. ವರೆಗೂ ಬಂದು ತಲುಪಿತ್ತು. ಡೀಸೆಲ್ ಬೆಲೆ 73.85 ರೂ.ಗೆ ಇಳಿಕೆಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 85. 24 ರೂ. ಮತ್ತು ಡೀಸೆಲ್ ಬೆಲೆ 77.40 ರೂ.ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 81.08 ರೂ.ಗೆ ಬಂದು ತಲುಪಿದೆ. ಇಳಿಕೆಯಾಗುತ್ತಿರುವ ಪ್ರಮಾಣ ಅಲ್ಪವಾಗಿದ್ದರೂ ಗ್ರಾಹಕನಿಗೆ ಇದು ಕೊಂಚ ಮಟ್ಟಿಗಿನ ನಿರಾಳತೆ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ