ಆ್ಯಪಲ್ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್ ಮಾಡಿಕೊಡಲಾಗುವುದು
ಸೋಮವಾರ, 7 ಅಕ್ಟೋಬರ್ 2019 (06:06 IST)
ನವದೆಹಲಿ : ಪ್ರತಿಷ್ಠಿತ ಆ್ಯಪಲ್ ಸಂಸ್ಥೆಯ ಕೆಲವು ಫೋನ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ಸರ್ವಿಸ್ ಸೇವೆಯನ್ನು ನೀಡಲು ಕಂಪೆನಿ ನಿರ್ಧಾರ ಮಾಡಿದೆ.
ಐಫೋನ್ 6S ಹಾಗೂ ಐಫೋನ್ 6S ಪ್ಲಸ್ ಮಾಡೆಲ್‌ಗಳ ಕೆಲವು ಪೋನ್ಗಳಲ್ಲಿನ ಕಾಂಪೋನೆಂಟ್ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಸಮಸ್ಯೆಗಳು ಕಂಡುಬಂದಿದ್ದು,. ಹೀಗಾಗೀ ಆ್ಯಪಲ್ ಸಂಸ್ಥೆ ಸರ್ವಿಸ್ ಮತ್ತು ರಿಪೇರಿ ಮಾಡಿಕೊಡಲು ಮುಂದಾಗಿದೆ.
ಅಕ್ಟೋಬರ್ 2018 ರಿಂದ ಆಗಸ್ಟ್ 2019ರ ನಡುವಿನ ಅವಧಿಯಲ್ಲಿ ಉತ್ಪಾದಿಸಲಾದ ಕೆಲವೊಂದು ಫೋನ್‌ಗಳಲ್ಲಿ ತಾಂತ್ರಿಕ ದೋಷವಿದ್ದು, ಅದರ ಬಗ್ಗೆ ಆ್ಯಪಲ್ ತನ್ನ ಚೆಕ್ ಬಾಕ್ಸ್ನಲ್ಲಿ ನಮೂದಿಸಿದೆ.. ಷರತ್ತು & ನಿಬಂಧನೆಗಳಿಗೆ ಒಳಪಟ್ಟು, ಫೋನ್ ಖರೀದಿ ಮಾಡಿದ ದಿನಾಂಕದಿಂದ 2 ವರ್ಷಗಳ ಒಳಗಿನ ಅವಧಿಯಲ್ಲಿ, ಫೋನ್‌ನಲ್ಲಿ ಸಮಸ್ಯೆ ಕಂಡು ಬಂದಲ್ಲಿ ರಿಪೇರಿ ಮಾಡಿಕೊಡಲಾಗುವುದು.