ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾದ ಮಾರುತಿ ಸುಜುಕಿ ಎಸ್-ಕ್ರಾಸ್ ಆವೃತ್ತಿಯ ಕಾರುಗಳು, ಸೆಪ್ಟೆಂಬರ್ 2015ರಲ್ಲಿ ಕೇವಲ 1.3 ಲೀಟರ್ ಡಿಡಿಐಎಸ್ 200 ಮತ್ತು 1.6 ಲೀಟರ್ ಡಿಡಿಐಎಸ್ 320 ಡೀಸೆಲ್ ಇಂಜಿನ್ ಹೊಂದಿದ್ದ ಕಾರುಗಳು ಮಾರಾಟದಲ್ಲಿ ತೀವ್ರ ಹಿನ್ನಡೆ ಕಂಡಿದ್ದವು.
ಮಾರುತಿ ಸುಜುಕಿ ಎಸ್-ಕ್ರಾಸ್ ಆವೃತ್ತಿಯ ಕಾರುಗಳು 1.5 ಲೀಟರ್ ಎಮ್-15 ಪೆಟ್ರೋಲ್ ಎಂಜಿನ್, 5-ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಪ್ರಸಕ್ತವಾಗಿ ಈ ಆವೃತ್ತಿಯ ಕಾರುಗಳ ಮಾರುಕಟ್ಟೆಯಲ್ಲಿ 8.03 ಲಕ್ಷ ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ 12.05 ಲಕ್ಷ ರೂಪಾಯಿಗಳಿಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಮಾರುತಿ ಸುಜುಕಿಯ ಎಸ್-ಕ್ರಾಸ್ ಪೆಟ್ರೋಲ್ ಎಂಜಿನ್ ಆವೃತ್ತಿಯ ಕಾರುಗಳ ದರವನ್ನು 7 ರಿಂದ 10 ಲಕ್ಷ ರೂಪಾಯಿಗಳಿಗೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.