ಕೊನೆ ಕ್ಷಣದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಹೊರಟವರಿಗೆ ಶಾಕ್ ಕೊಟ್ಟ ವೆಬ್ ಸೈಟ್: ಜನರಿಂದ ಹಿಡಿಶಾಪ

Krishnaveni K

ಶುಕ್ರವಾರ, 26 ಜುಲೈ 2024 (08:56 IST)
ನವದೆಹಲಿ: ಆದಾಯ ತೆರಿಗೆ ಸಲ್ಲಿಕೆ ಮಾಡಲು ಜುಲೈ 31 ಕೊನೆಯ ದಿನಾಂಕ. ಹೀಗಾಗಿ ತೆರಿಗೆ ಪಾವತಿ ಮಾಡಲು ಈಗ ಜನರು ಧಾವಂತದಲ್ಲಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಕೈ ಕೊಟ್ಟ ವೆಬ್ ಸೈಟ್ ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಆದಾಯ ತೆರಿಗೆ ವಿಭಾಗದ ವೆಬ್ ಸೈಟ್ ಹೋಗಿ ತೆರಿಗೆ ಪಾವತಿ ಮಾಡಬಹುದು. ಎಲ್ಲರೂ ಈಗ ಆನ್ ಲೈನ್ ಮುಖಾಂತರವೇ ಇನ್ ಕಮ್ ಟ್ಯಾಕ್ಸ್ ಫೈಲಿಂಗ್ ಮಾಡುತ್ತಾರೆ. ಆದರೆ ಕೊನೆಯ ಕೆಲವೇ ದಿನಗಳು ಬಾಕಿಯಿರುವ ಕಾರಣ ಸಾಕಷ್ಟು ಜನ ವೆಬ್ ಸೈಟ್ ಓಪನ್ ಮಾಡಿಕೊಂಡು ಕೂತಿದ್ದಾರೆ.

ಪರಿಣಾಮ, ವೆಬ್ ಸೈಟ್ ಸರ್ವರ್ ಡೌನ್ ಆಗಿದ್ದು ಕೆಲವರಿಗೆ ಅರ್ಧ ಫೈಲಿಂಗ್ ಮಾಡುವಷ್ಟರಲ್ಲಿ ಫೈಲ್ಯೂರ್ ಎಂಬ ಮಾಹಿತಿ ಬರುತ್ತಿದೆ. ಮತ್ತೆ ಕೆಲವರಿಗೆ ವೆಬ್ ಸೈಟೇ ಓಪನ್ ಆಗುತ್ತಿಲ್ಲ. ಎಲ್ಲಾ ಮಾಡಿ ಒಟಿಪಿ ಬರುವ ಹಂತದಲ್ಲಿ ಫೈಲ್ಡ್ ಅಂತ ಸಂದೇಶ ಬರುತ್ತಿದೆ. ಇದರಿಂದ ಜನರು ಹತಾಶೆಗೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಆದಾಯ ತೆರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಆನ್ ಲೈನ್ ಮೂಲಕ ಪಾವತಿ ಮಾಡಿ ಎಂದು ಈ ರೀತಿ ಅವ್ಯವಸ್ಥೆ ಮಾಡಿದರೆ ಹೇಗೆ? ಜುಲೈ 31 ರ ನಂತರವೂ ಪಾವತಿ ಮಾಡಬಹುದು ಎಂದಾದರೆ ಹೇಳಿ. ನಿಮ್ಮ ರಶ್ ಎಲ್ಲಾ ಮುಗಿದ ಮೇಲೆಯೇ ಮಾಡುತ್ತೇವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಎಲ್ಲರೂ ವೆಬ್ ಸೈಟ್ ಓಪನ್ ಮಾಡಿಕೊಂಡಿರುವುದರಿಂದ ಸಹಜವಾಗಿಯೇ ತಾಂತ್ರಿಕ ದೋಷವುಂಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ