ಕ್ಲೋಸ್ ಆಗುತ್ತಿದೆ ನಿಮ್ಮ ಈ ಪೇಮೆಂಟ್ ಬ್ಯಾಂಕ್

ಸೋಮವಾರ, 22 ಜುಲೈ 2019 (06:44 IST)
ನವದೆಹಲಿ : ಗ್ರಾಹಕರು ಹಣ ವರ್ಗಾವಣೆಗಾಗಿ ಬಳಸುತ್ತಿದ್ದ ಅದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ ಬ್ಯಾಂಕ್ ಶನಿವಾರ ದಿಂದ ಕ್ಲೋಸ್ ಆಗಿದೆ.
ಫೆಬ್ರವರಿ 2018 ರಲ್ಲಿ ಐಡಿಯಾ ಮತ್ತು ಅದಿತ್ಯ ಬಿರ್ಲಾ ಗ್ರೂಪ್ ಜಂಟಿ ಸಹಭಾಗಿತ್ವದಲ್ಲಿ ಶುರುವಾದ ಅದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ ಬ್ಯಾಂಕ್ ಸಣ್ಣ ಉಳಿತಾಯ, ವಲಸೆ, ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೇವೆಗಳನ್ನು ಒದಗಿಸಿತ್ತು. ಅಲ್ಲದೇ ಪೇಮೆಂಟ್ ಬ್ಯಾಂಕ್ ವಿಭಾಗದಲ್ಲಿ ಇದು ನಾಲ್ಕನೇ ಬ್ಯಾಂಕ್ ಆಗಿ ಆರ್.ಬಿ.ಐ. ಉತ್ತೇಜಿಸಿತ್ತು.


ಆದರೆ ಇದೀಗ ಕ್ಲೋಸ್ ಆಗುತ್ತಿರುವ ಹಿನ್ನಲೆಯಲ್ಲಿ ಜುಲೈ 26 ರ ಬಳಿಕ ಖಾತೆಗಳಿಗೆ ಯಾವುದೇ ಹಣ ಹಾಕದಂತೆ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ