ನವದೆಹಲಿ: ದೇಶದಾದ್ಯಂತ ಯುಪಿಐ ಪಾವತಿ ಸರ್ವರ್ ಡೌನ್ ಆಗಿದ್ದು, ಮಧ್ಯಾಹ್ನ ಊಟಕ್ಕೆ ಹೋದವರು ಪಾವತಿ ಮಾಡಲಾಗದೇ ಪರದಾಡುತ್ತಿದ್ದಾರೆ. ಫೋನ್ ಪೇ, ಗೂಗಲ್ ಪೇ ಸೇರಿದಂತೆ ಎಲ್ಲಾ ಆನ್ ಲೈನ್ ಪಾವತಿ ಆಪ್ ಗಳೂ ಡೌನ್ ಆಗಿವೆ.
ಇತ್ತೀಚೆಗಿನ ದಿನಗಳಲ್ಲಿ ಇದು ಎರಡನೇ ಬಾರಿ ಈ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ದೇಶದಾದ್ಯಂತ ಆನ್ ಲೈನ್ ವ್ಯವಹಾರಗಳು ಸ್ಥಗಿತಗೊಂಡಿವೆ. ಪಾವತಿ ಮಾಡಲಾಗದೇ ಬಳಕೆದಾರರು ಪರದಾಡುವಂತಾಗಿದೆ. ಕೆಲವೇ ಗಂಟೆಗಳ ಹಿಂದಿನಿಂದ ಈ ಸಮಸ್ಯೆ ಕಂಡುಬರುತ್ತಿದೆ.
ಈಗೀಗ ಎಲ್ಲರೂ ಯುಪಿಐ ಪಾವತಿಗೆ ಅವಲಂಬಿತರಾಗಿದ್ದಾರೆ. ಹೊರಗೆ ಹೋಗುವಾಗ ಪರ್ಸ್ ತೆಗೆದುಕೊಂಡು ಹೋಗುವ ಅಭ್ಯಾಸವನ್ನೇ ಬಿಟ್ಟಿದ್ದಾರೆ. ಆದರೆ ಇದೀಗ ಯುಪಿಐ ಪಾವತಿ ಅಡಚಣೆಯಾಗಿರುವುದರಿಂದ ಸಾಕಷ್ಟು ಜನ ಪಾವತಿ ಮಾಡಲಾಗದೇ ಒದ್ದಾಡಿದ್ದಾರೆ. ಹೀಗಾಗಿ ಇಂದು ಹೊರಗೆ ಹೋಗುವುದಿದ್ದರೆ ತಪ್ಪದೇ ಪರ್ಸ್ ನಲ್ಲಿ ಹಣ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ಯುಪಿಐ ಪಾವತಿ ಅಡಚಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಯುಪಿಐ ಸೇವೆಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಇದಕ್ಕೆ ಸ್ಪಷ್ಟ ಕಾರಣವನ್ನು ಇದುವರೆಗೆ ನೀಡಿಲ್ಲ.