ಅಕ್ಟೋಬರ್ 2ರಿಂದ ಏರ್ ಇಂಡಿಯಾದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಬಂದ್

ಶುಕ್ರವಾರ, 30 ಆಗಸ್ಟ್ 2019 (10:49 IST)
ನವದೆಹಲಿ : ಏರ್ ಇಂಡಿಯಾ ಸಂಸ್ಥೆ ತನ್ನ ಎಲ್ಲಾ ವಿಮಾನಗಳಲ್ಲಿ ಬ್ಯಾಗ್, ಕಪ್ ಮತ್ತು ಸ್ಟ್ರಾಗಳಂತಹ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದೆ.




ಏರ್ ಇಂಡಿಯಾದಲ್ಲಿ ವಿಶೇಷ ಊಟಕ್ಕಾಗಿ ಪ್ಲಾಸ್ಟಿಕ್ ಕಟ್ಲರಿಗಳ ಬದಲಿಗೆ ಪರಿಸರ ಸ್ನೇಹಿ ಬ್ರಿಚ್ ಮರದ ಕಟ್ಲರಿಯನ್ನು ಬಳಸುತ್ತದೆ.ಸಿಬ್ಬಂದಿ ಊಟದ ಕಟ್ಲರಿಯನ್ನು ಹಗುರವಾದ ತೂಕದ ಉಕ್ಕಿನ ಕಟ್ಲರಿಯೊಂದಿಗೆ ಬದಲಾಯಿಸಲಾಗುತ್ತದೆ. ಪ್ಲಾಸ್ಟಿಕ್ ಟಂಬ್ಲರ್‌ಗಳು ಮತ್ತು ಟೀಕಪ್‌ಗಳನ್ನು ಕಾಗದದ ಆವೃತ್ತಿಗೆ ಬದಲಾಯಿಸುತ್ತೇವೆ ಎಂದು ಸಂಸ್ಥೆ ಹೇಳಿದೆ.


ರಾಷ್ಟ್ರಪಿತ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಅಕ್ಟೋಬರ್ 2ರಿಂದ ಇದಕ್ಕೆ ನಿಷೇಧ ಹೇರಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ