ಪತ್ನಿ ಅವಿವಾ ಜೊತೆ ಮಾಲ್ಡೀವ್ಸ್ ನಲ್ಲಿ ಅಭಿಷೇಕ್ ಅಂಬರೀಶ್ ಜಾಲಿ ಡೇ

Krishnaveni K

ಗುರುವಾರ, 12 ಸೆಪ್ಟಂಬರ್ 2024 (09:15 IST)
Photo Credit: Instagram
ಬೆಂಗಳೂರು: ಒಂದೆಡೆ ಬಿಗ್ ಬ್ರದರ್ ದರ್ಶನ್ ಜೈಲಿನಲ್ಲಿ ಚಡಪಡಿಸುತ್ತಿದ್ದರೆ ಇತ್ತ ತಮ್ಮ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಜೊತೆಗೆ ಮಾಲ್ಡೀವ್ಸ್ ನಲ್ಲಿ ಹಾಲಿಡೇ ಮೂಡ್ ನಲ್ಲಿದ್ದಾರೆ.

ಮೂಲಗಳ ಪ್ರಕಾರ ಅವಿವಾ ಗರ್ಭಿಣಿಯಾಗಿದ್ದು ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಈಗ ಪತ್ನಿಯನ್ನು ಖುಷಿಯಾಗಿಡಲು ಅಭಿಷೇಕ್ ವಿದೇಶ ಪ್ರವಾಸ ಮಾಡಿದ್ದಾರೆ. ಮಾಲ್ಡೀವ್ಸ್ ನ ಸುಂದರ ಕಡಲ ತೀರದಲ್ಲಿ ಪತ್ನಿ ಜೊತೆಗೆ ಪ್ರಶಾಂತವಾಗಿ ಕಾಲ ಕಳೆಯುತ್ತಿರುವ ಕ್ಷಣಗಳು ವೈರಲ್ ಆಗಿದೆ.

ಅವಿವಾ ಈ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಎಲ್ಲಾ ವಿಡಿಯೋಗಳಲ್ಲಿ ಅವಿವಾ ತಮ್ಮ ಹೊಟ್ಟೆ ಮರೆ ಮಾಚಿಕೊಂಡಿದ್ದಾರೆ. ಹೀಗಾಗಿ ಆಕೆ ಗರ್ಭಿಣಿ ಎನ್ನುವ ಸುದ್ದಿಗೆ ಮತ್ತಷ್ಟು ಬಲ ಬಂದಂತಾಗಿದೆ. ಕೆಲವು ದಿನಗಳ ಹಿಂದೆ ಅವಿವಾ ಸೀಮಂತ ಶಾಸ್ತ್ರ ನೆರವೇರಲಿದೆ ಎಂಬ ಸುದ್ದಿಗಳಿತ್ತು. ಆದರೆ ಆ ಬಳಿಕ ಅದು ತಣ್ಣಗಾಗಿತ್ತು.

ತನ್ನ ದೊಡ್ಡಣ್ಣ ಎಂದೇ ಅಭಿಮಾನದಿಂದ ಕರೆಯುವ ದರ್ಶನ್ ಜೈಲಿನಲ್ಲಿರುವಾಗ ಬಹುಶಃ ಸಂಭ್ರಮ ಬೇಡ ಎಂದು ಅಭಿಷೇಕ್ ನಿರ್ಧರಿಸಿರಬಹುದು. ಕೆಲವು ದಿನಗಳ ಹಿಂದೆ ಅವರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಇದೀಗ ಪತ್ನಿ ಜೊತೆ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ