ಆರ್‌ಸಿಬಿ ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ಳುತ್ತೇನೆಂದ ನಟಿ ಹನಿರೋಸ್‌ನಿಂದ ಮತ್ತೊಂದು ಪೋಸ್ಟ್‌

sampriya

ಗುರುವಾರ, 23 ಮೇ 2024 (14:42 IST)
Photo By Instagram
ಅಹಮದಾಬಾದ್‌: ರಾಜಸ್ಥಾನ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಲ್ಲಿ ಬಿಕಿನಿ ತೊಟ್ಟಿರುವ ಫೋಟೋ ಹಂಚಿಕೊಳ್ಳುತ್ತೇನೆಂದು ಹೇಳಿದ್ದ ನಟಿ ಹನಿರೋಸ್ ಇದೀಗ ಇನ್‌ಸ್ಟಾಗ್ರಾಂನಲ್ಲಿ ಒಡೆದ ಹೃದಯದ ಎಮೋಜಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಪಂದ್ಯಾಟಕ್ಕೂ ಮುನ್ನಾ ಹನಿರೋಸ್‌ ಅವರು, ಆರ್‌ಸಿಬಿ ಗೆದ್ದರೆ ನಾನು ಪಂದ್ಯದ ನಂತರ ನನ್ನ ಬಿಕಿನಿ ಚಿತ್ರವನ್ನು ಪೋಸ್ಟ್ ಮಾಡುತ್ತೇನೆ. ʻAAARRRRR CEEEEE BEEEEE!!!!!!!!ʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಆರ್‌ಸಿಬಿ ಪಂದ್ಯದ ಸೋಲಿನ ಬಳಿಕ ʻಆರ್‌ಸಿಬಿ ಎಂಬ ಹೆಸರಿನೊಂದಿಗೆʼ ಮೂರು ಒಡೆದ ಹೃದಯದ ಎಮೋಜಿಯನ್ನ ಹಂಚಿಕೊಂಡಿದ್ದಾರೆ.

ನಟಿಯ ಪೋಸ್ಟ್‌ಗೆ ಅಭಿಮಾನಿಗಳು ವಿಧವಿಧವಾಗಿ ಕಮೆಂಟ್‌ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ ಒಂದೇ ಒಂ ದು ಫೋಟೋವನ್ನು ಹಂಚಿಕೊಳ್ಳಿ ಎಂದರೆ ಮತೊಬ್ಬರು ಸದ್ಯ ಆ ದೇವರು ನಮ್ಮನ್ನು ಬದುಕಿಸಿದ ಅಂತ ಕಮೆಂಟ್‌ ಮಾಡಿದ್ದಾರೆ.

ಇನ್ನೂ ನಟಿ ಹನಿರೋಸ್‌ ಅವರು ಮಾಡುವ ಸಿನಿಮಾಗಿಂತ ಅವರು ಹಾಟ್‌ ಫೋಟೋ ಸಂಬಂಧನೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಈವರು ಮಾನ್ಸ್ಟರ್‌, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ