BBK11: ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಅಲ್ಲ, ಹೆಣ್ಮಕ್ಕಳಿಗೂ ಇರುತ್ತೆ ಎಂದು ರೊಚ್ಚಿಗೆದ್ದ ಗೌತಮಿ

Krishnaveni K

ಗುರುವಾರ, 14 ನವೆಂಬರ್ 2024 (10:50 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಟಾಸ್ಕ್ ಮಾಡುವ ಭರದಲ್ಲಿ ಗೌತಮಿ ಗೌಡ ರೊಚ್ಚಿಗೆದ್ದಿದ್ದು, ಸಹ ಸ್ಪರ್ಧಿ ಸುರೇಶ್ ಗೆ ಹುಡುಗರಿಗೆ ಮಾತ್ರವಲ್ಲ, ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆ ಎಂದು ರೋಷಾವೇಷ ತೋರಿಸಿದ್ದಾರೆ.

ಬಿಗ್ ಬಾಸ್ ಈ ವಾರ ಎಲ್ಲಾ ಮನೆಯ ಎಲ್ಲಾ ಸ್ಪರ್ಧಿಗಳನ್ನು ಜೋಡಿಗಳನ್ನಾಗಿ ಮಾಡಿದೆ. ಅದರಂತೆ ಜೋಡಿಗಳು ಸ್ತಬ್ಧವಾಗಿ ನಿಲ್ಲಬೇಕು. ಇತರೆ ಸ್ಪರ್ಧಿಗಳು ಅವರಿಗೆ ನೀರೆರಚಬೇಕು. ಅತೀ ಹೆಚ್ಚು ತಪ್ಪು ಮಾಡಿದವರಿಗೆ ಯಾವುದೇ ಅಂಕ ಸಿಗುವುದಿಲ್ಲ. ಕಡಿಮೆ ತಪ್ಪು ಮಾಡಿದವರಿಗೆ 100 ಅಂಕ ಸಿಗುತ್ತದೆ.

ಈ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಬಕೆಟ್ ನಲ್ಲಿ ನೀರು ತೆಗೆದುಕೊಂಡು ಭವ್ಯಾ ಮೇಲೆ ಎರಚಲು ಪ್ರಯತ್ನಿಸುವಾಗ ಕಾಲಿಗೆ ಹೊಡೆದಿದೆ. ಈ ವೇಳೆ ಭವ್ಯಾ ನೋವು ಅನುಭವಿಸಿದ್ದನ್ನು ನೋಡಿ ಗೌತಮಿ ರೊಚ್ಚಿಗೆದ್ದಿದ್ದಾರೆ. ಹುಡುಗರಿಗೆ ಮಾತ್ರವಲ್ಲ, ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಎಂದು ಇರುತ್ತದೆ. ನೀರು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಟಾಸ್ಕ್ ಮುಗಿದ ಬಳಿಕ  ಭವ್ಯಾ ಕಾಲು ನೋವಿನಿಂದ ಅಳುತ್ತಾ ಕೂತಿದ್ದರೆ ಇತ್ತ ಅವರ ಜೊತೆಗಾರ ಮಂಜು ಮತ್ತು ಗೌತಮಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಗೌತಮಿ ಈ ಮಾತು ಹೇಳಿದ್ದಾರೆ. ಆಗ ಸುರೇಶ್ ಕೂಡಾ ತಿರುಗೇಟು ಕೊಟ್ಟಿದ್ದು ನೀವು ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ