ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೆ ಲವ್ ಆಯ್ತು!

ಗುರುವಾರ, 12 ಸೆಪ್ಟಂಬರ್ 2019 (09:03 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಟ್ರೈಲರ್ ನೋಡಿದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಟ್ರೈಲರ್ ನ ಮೊದಲ ಭಾಗ ನೋಡಿದಾಗ ಇದು ಎಂದಿನಂತೆ ಗಣೇಶ್ ಸ್ಟೈಲ್ ನಲ್ಲಿ ಲವ್ ಸೀನ್ ಗಳಿದೆ. ಇದನ್ನು ನೋಡಿ ಗಣೇಶ್ ಟಿಪಿಕಲ್ ಲವ್ವರ್ ಬಾಯ್ ಆಗಿ ಚಿತ್ರದಲ್ಲಿ ಕಾಣಿಸಿರಬಹುದು ಎನಿಸುತ್ತದೆ. ಆದರೆ ಟ್ರೈಲರ್ ನ ದ್ವಿತೀಯಾರ್ಧ ಇದನ್ನು ಸಂಪೂರ್ಣ ಸುಳ್ಳು ಮಾಡುತ್ತದೆ.

ದ್ವಿತಿಯಾರ್ಧದಲ್ಲಿ ಗಣೇಶ್ ಪಕ್ಕಾ ಕನ್ನಡ ಹೋರಾಟಗಾರನಾಗಿ, ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟ್ರೈಲರ್ ನೋಡಿದ ವೀಕ್ಷಕರಿಗೆ ಇಷ್ಟವಾಗಿದ್ದು ಇದುವೇ. ಗಣೇಶ್ ರಗಡ್ ಸ್ಟೈಲ್ ನೋಡಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.  ಈ ಟ್ರೈಲರ್ ನೋಡಿ ಸಿನಿಮಾದಲ್ಲಿ ಗಣೇಶ್ ಗೆ ಲವ್ ಲೈಫ್ ಕೈ ಹಿಡಿಯುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೇಕ್ಷಕರಿಗಂತೂ ಸಿನಿಮಾ ಮೇಲೆ ಲವ್ ಆಗಿರುವುದು ನಿಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ