ಕರಿಕೋಟು ಧರಿಸಿ ಕಿರುತೆರೆಗೆ ಎಂಟ್ರಿ ಕೊಟ್ಟ 'ಉಗ್ರಂ' ಬೆಡಗಿ ಹರಿಪ್ರಿಯಾ
ಸದ್ಯ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ. ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಶೀಘ್ರದಲ್ಲಿ ಎಂದು ಅಡಿಬರಹವನ್ನು ನೀಡಲಾಗಿದೆ. ಈ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ವಕೀಲೆಯಾಗಿ ಕಾಣಿಸಿಕೊಂಡಿದ್ದು, ಇದು ಸಿನಿಮಾನೋ ಅಥವಾ ಧಾರಾವಾಹಿನೋ ಎಂಬುದರ ಬಗ್ಗೆ ಸ್ಪಷ್ಟಣೆಯಿಲ್ಲ.
ಇನ್ನೂ ಪ್ರೋಮೋ ನೋಡಿದವರು ನೀವು ಕಿರುತೆರೆಗೆ ಬರಬೇಡಿ, ನಿಮಗೆ ಸಿನಿಮಾನೇ ಸೂಕ್ತ ವೇದಿಕೆ ಎಂದು ಹೇಳಿದ್ದಾರೆ.