ಇಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಚಾಲನೆ
ಬೆಂಗಳೂರಿನಲ್ಲಿ ಇಂದಿನಿಂದ ಮಾರ್ಚ್ 30ರವರೆಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಫಿಲಂ ಫೆಸ್ಟಿವಲ್ ಆಯೋಜಿಸಿವೆ. ವಿಧಾನಸೌಧದ ಎದುರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫಿಲಂ ಫೆಸ್ಟಿವಲ್ ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವ ಸ್ಮರಣ ಸಂಚಿಕೆಯನ್ನು ವಿಜಯೇಂದ್ರ ಪ್ರಸಾದ್ ಬಿಡುಗಡೆ ಮಾಡಲಿದ್ದಾರೆ. ಅಶೋಕ್ ಕಶ್ಯಪ್ ಉಪಸ್ಥಿತರಿರುತ್ತಾರೆ. ಮಾರ್ಚ್ 23ರಿಂದ ಮಾರ್ಚ್ 30, 2023ರವರೆಗೆ ರಾಜಾಜಿನಗರದ ಒರಾಯನ್ ಮಾಲ್ನ 11 ಸ್ಕ್ರೀನ್ಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಚಲನಚಿತ್ರೋತ್ಸವವು ಸೆನೆಗಲ್, ಇರಾನ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಫ್ರಾನ್ಸ್ನಂತಹ ಅಂತರಾಷ್ಟ್ರೀಯ ಸಿನಿಮಾ ಉದ್ಯಮಗಳ ಚಲನಚಿತ್ರಗಳನ್ನು ಸಹ ಪ್ರದರ್ಶಿಸುತ್ತದೆ. ಸಿನಿಮಾ ಆಫ್ ದಿ ವರ್ಲ್ಡ್ , ಭಾರತೀಯ ಸಿನಿಮಾ, ಕನ್ನಡ ಸಿನಿಮಾ ಮತ್ತು ಏಷ್ಯನ್ ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ಹಬ್ಬದ ಸಂದರ್ಭದಲ್ಲಿ ನಡೆಯಲಿವೆ.