ಕೆಜಿಎಫ್ 2 ಹಾಡನ್ನು ಹೋಲುತ್ತಿದೆಯಾ ಕಬ್ಜ ಟೈಟಲ್ ಹಾಡು?!

ಭಾನುವಾರ, 5 ಫೆಬ್ರವರಿ 2023 (08:31 IST)
Photo Courtesy: Twitter
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೈಟಲ್ ಹಾಡು ನಿನ್ನೆ ಬಿಡುಗಡೆಯಾಗಿದ್ದು, ಅದ್ಭುತ ರೆಸ್ಪಾನ್ಸ್ ಪಡೆದಿದೆ.

ಇದರ ಬೆನ್ನಲ್ಲೇ ಕೆಲವರು ಈ ಹಾಡಿನ ಬಗ್ಗೆ ಟೀಕೆಯನ್ನೂ ಮಾಡಿದ್ದಾರೆ. ಕಬ್ಜ ಸಿನಿಮಾದ ಟೈಟಲ್ ಹಾಡು ಥೇಟ್ ಕೆಜಿಎಫ್ 2 ನ ತೂಫಾನ್ ಹಾಡನ್ನೇ ಹೋಲುತ್ತಿದೆ ಎನ್ನುವುದು ಕೆಲವರ ಅಭಿಪ್ರಾಯ.

ಕೆಜಿಎಫ್ ಗೆ ಸಂಗೀತ ನೀಡಿದ್ದ ರವಿ ಬಸ್ರೂರು ಅವರೇ ಕಬ್ಜ ಸಿನಿಮಾಗೂ ಸಂಗೀತ ಸಂಯೋಜಿಸಿದ್ದಾರೆ. ಹೀಗಾಗಿ ಎರಡೂ ಹಾಡುಗಳ ನಡುವೆ ಸಾಮ್ಯತೆಯಿರುವುದು ನಿಜ. ಈ ಕಾರಣಕ್ಕೆ ಕೆಲವರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ