ಕಬ್ಜ ರಿಲೀಸ್ ಬೆನ್ನಲ್ಲೇ ನಿರ್ದೇಶಕ ಆರ್.ಚಂದ್ರುಗೆ ಪವನ್ ಕಲ್ಯಾಣ್ ರಿಂದ ಭರ್ಜರಿ ಆಫರ್!

ಶುಕ್ರವಾರ, 17 ಮಾರ್ಚ್ 2023 (09:40 IST)
Photo Courtesy: Twitter
ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ರಿಲೀಸ್ ಆದ ಬೆನ್ನಲ್ಲೇ ನಿರ್ದೇಶಕ ಆರ್.ಚಂದ್ರುಗೆ ಭರ್ಜರಿ ಆಫರ್ ಸಿಕ್ಕಿದೆ.

ಕಬ್ಜ ಸಿನಿಮಾವನ್ನು ವೀಕ್ಷಿಸಿರುವ ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ತಮಗಾಗಿ ಒಂದು ಸಿನಿಮಾ ನಿರ್ದೇಶನ ಮಾಡಲು ಚಂದ್ರುಗೆ ಆಫರ್ ನೀಡಿದ್ದಾರಂತೆ. ಅಷ್ಟೇ ಅಲ್ಲದೆ, ಚಂದ್ರು ಬಳಿ ಹೊಸ ಪ್ರಾಜೆಕ್ಟ್ ಬಗ್ಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಕಬ್ಜ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಳಿವೆ. ಅಲ್ಲದೆ, ವಿಂಟೇಜ್ ಕಾರುಗಳನ್ನು ಬಳಸಿ 80 ರ ದಶಕದ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಇದನ್ನೆಲ್ಲಾ ನೋಡಿದ ಪವನ್ ಕಲ್ಯಾಣ್ ಇಂಪ್ರೆಸ್ ಆಗಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ