ರಮ್ಯಾಗೆ ಹೊಂಬಾಳೆ ಕಾರ್ತಿಕ್ ಗೌಡ ವಿಶ್

ಮಂಗಳವಾರ, 29 ನವೆಂಬರ್ 2022 (17:23 IST)
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಸಂದರ್ಭದಂದು ಕೆ.ಆರ್.ಜಿ ನಿರ್ಮಾಣ ಸಂಸ್ಥೆಯ ನಿರ್ಮಾಪಕ ಹಾಗೂ ಹೊಂಬಾಳೆ ಫಿಲ್ಮ್ಸ್ ನ ಕಾರ್ತಿಕ್ ಗೌಡ ರಮ್ಯಾ ಜೊತೆಗಿನ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ‘ಹ್ಯಾಪಿ ಬರ್ತಡೇ ದಿವ್ಯಾಸ್ಪಂದನ’ ಎಂದು ಬರೆದು ಲವ್ ಸಿಂಬಲ್ ಹಾಕಿ ಪೋಸ್ಟ್ ಮಾಡಿದ್ದಾರೆ.ಈ ಪೋಸ್ಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ‘ಥ್ಯಾಂಕ್ಯೂ K’ ಎಂದು ಬರೆದಿದ್ದಾರೆ. ಈ ಪೋಸ್ಟ್ ಹಲವು ರೀತಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಾರ್ತಿಕ್ ಗೌಡ ಅವರು ತಮ್ಮ ನಿರ್ಮಾಣದ ಸಂಸ್ಥೆಯಿಂದ ತಯಾರಾಗುತ್ತಿರುವ ‘ಉತ್ತರಕಾಂಡ’ ಸಿನಿಮಾದ ಮೂಲಕ ರಮ್ಯಾ ಅವರನ್ನು ವಾಪಸ್ಸು ಸಿನಿಮಾ ರಂಗಕ್ಕೆ ಕರೆತಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ