ವಿಕ್ರಾಂತ್ ರೋಣ ನೋಡಿ ಸುದೀಪ್ ಮಗಳು ಸಾನ್ವಿ ಕೊಟ್ಟ ಬೆಸ್ಟ್ ರಿಯಾಕ್ಷನ್ ಇದು!
ಇನ್ನು, ಅಪ್ಪನ ಸಿನಿಮಾ ನೋಡಿದ ಮೇಲೆ ಮಗಳ ರಿಯಾಕ್ಷನ್ ಹೇಗಿತ್ತು ಎಂಬ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಮಾಧ‍್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಸಾನ್ವಿ ಸಿನಿಮಾ ನೋಡಿ ಅತ್ತಿದ್ದಾಳೆ. ಅವಳ ಅಳುವೇ ಬೆಸ್ಟ್ ಕಾಂಪ್ಲಿಮೆಂಟ್. ಅವಳಿಗೆ ಸಿನಿಮಾ ತುಂಬಾನೇ ಇಷ್ಟವಾಗಿದೆ ಎಂದು ಪ್ರಿಯಾ ಸುದೀಪ್ ಹೇಳಿದ್ದಾರೆ. ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಕತೆ ಮಾತ್ರವಲ್ಲದೆ ತಂದೆ-ಮಗಳ ನಡುವಿನ ಬಾಂಧವ್ಯದ ಬಗ್ಗೆಯೂ ದೃಶ್ಯವಿದೆ. ಈ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ.