R Subbalakshmi: ಮಲಯಾಳಂ ಸಿನಿಮಾದ ಅಜ್ಜಿ, ನಟಿ ಆರ್. ಸುಬ್ಬಲಕ್ಷ್ಮಿ ಇನ್ನಿಲ್ಲ

ಶುಕ್ರವಾರ, 1 ಡಿಸೆಂಬರ್ 2023 (11:00 IST)
ಕೊಚ್ಚಿ: ಮಲಯಾಳಂ ಸಿನಿಮಾಗಳಲ್ಲಿ ಅಜ್ಜಿ ಪಾತ್ರದ ಮೂಲಕವೇ ಜನರನ್ನು ರಂಜಿಸುತ್ತಿದ್ದ ಹಿರಿಯ ನಟಿ ಆರ್. ಸುಬ್ಬಲಕ್ಷ್ಮಿ ನಿಧನರಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ 87 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಟನೆ ಮಾತ್ರವಲ್ಲದೆ, ಸಂಗೀತ ಕ್ಷೇತ್ರದಲ್ಲೂ ಸುಬ್ಬಲಕ್ಷ್ಮಿ ಖ್ಯಾತಿ ಪಡೆದಿದ್ದರು. ವಿಶೇಷವಾಗಿ ಅಜ್ಜಿ ಪಾತ್ರದ ಮೂಲಕವೇ ಸಹಜಾಭಿನಯದಿಂದ ಗಮನ ಸೆಳೆಯುತ್ತಿದ್ದರು.

ಮಲಯಾಳಂನ ಅನೇಕ ಸ್ಟಾರ್ ನಟರ ಜೊತೆ ನಟಿಸಿದ ಹೆಮ್ಮೆ ಅವರದ್ದು. ನಂದನಂ ಸಿನಿಮಾದಲ್ಲಿ ದಿಲೀಪ್ ಜೊತೆ ಮಾಡಿದ ಪಾತ್ರವಂತೂ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು.

ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ, ಸಿನಿರಸಿಕರು ಕಂಬನಿ ಮಿಡಿದಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಬ್ಬಲಕ್ಷ್ಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ