ಜ್ಯೂ.ಎನ್ ಟಿಆರ್-ಹೃತಿಕ್ ರೋಷನ್ ಕಾಂಬಿನೇಷನ್ ನ ‘ವಾರ್ 2’ ಬಿಡುಗಡೆ ದಿನಾಂಕ ಪ್ರಕಟ

ಗುರುವಾರ, 30 ನವೆಂಬರ್ 2023 (08:10 IST)
Photo Courtesy: Twitter
ಮುಂಬೈ: ಜ್ಯೂ.ಎನ್ ಟಿಆರ್ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ವಾರ್ 2 ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಆದರೆ ಈ ಸಿನಿಮಾ ನೋಡಲು ಪ್ರೇಕ್ಷಕರು ಇನ್ನೂ ಎರಡು ವರ್ಷ ಕಾಯಬೇಕು! ವಾರ್ 2 ಸಿನಿಮಾ 2025 ರ ಆಗಸ್ಟ್ 14 ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಘೋಷಿಸಿದೆ.

ಈ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಚಿತ್ರದಲ್ಲಿ ಖ್ಯಾತ ನಟಿ ಕಿಯಾರ ಅಡ್ವಾನಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಬಿಡುಗಡೆ ದಿನಾಂಕದ ಜೊತೆಗೆ ಚಿತ್ರತಂಡ ತುಣುಕೊಂದನ್ನು ಹೊರಬಿಟ್ಟಿದೆ. ಈ ಸಿನಿಮಾದಲ್ಲಿ ಹೃತಿಕ್ ಕಬೀರ್ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಸದ್ಯಕ್ಕೆ ಸಿನಿಮಾ ಶೂಟಿಂಗ್ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ