ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಗಳೇ ಸಾಕು ನಿಮ್ಮ ಆಯಸ್ಸು ಬೇಗ ಮುಗಿಸಲು!
ಆದರೆ ಈ ಗ್ಯಾಜೆಟ್ ಗಳೇ ನಮಗೆ ಬೇಗನೇ ವಯಸ್ಸಾಗಲು ಕಾರಣವಾಗಿದೆ. ಲ್ಯಾಪ್ ಟಾಪ್, ಮೊಬೈಲ್ ನಿಂದ ಬರುವ ಬ್ಲೂ ಲೈಟ್ ನಮ್ಮ ಜೀವಕೋಶಗಳ ಮೇಲೆ ಪರಿಣಾಮ ಬೀರಿ ನಮಗೆ ಬೇಗನೇ ವಯಸ್ಸಾಗುವಂತೆ ಮಾಡುತ್ತದೆ ಎಂದು ಅಮೆರಿಕಾದ ಅಧ‍್ಯಯನವೊಂದು ಬಹಿರಂಗಪಡಿಸಿದೆ.
ಇಲೆಕ್ಟ್ರಾನಿಕ್ ಉಪಕರಣಗಳಿಂದ ಹೊರ ಸೂಸುವ ಲೈಟ್ ನಮ್ಮ ಜೀವಕೋಶಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದುವುದಕ್ಕೆ ಅಡ್ಡಿಯಾಗಬಹುದು ಎಂಬುದು ಅಧ‍್ಯಯನಕಾರರ ಅಭಿಪ್ರಾಯ. ಹಿತಮಿತವಾಗಿ ಬಳಸಿದರೆ ಯಾವುದೇ ಸಮಸ್ಯೆಯಾಗಲ್ಲ. ಆದರೆ ಅತಿಯಾದರೆ ಸಮಸ್ಯೆಯಾಗಬಹುದು.