ವೈವಾಹಿಕ ಜೀವನ ಮುರಿದು ಬಿದ್ದ ಮೇಲೆ ನಾಗಚೈತನ್ಯ ದುರಾದೃಷ್ಟ ಶುರುವಾಯ್ತಾ?!
ನಾಗಚೈತನ್ಯ ನಾಯಕರಾಗಿರುವ ಥ್ಯಾಂಕ್ಯೂ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಬಾಕ್ ಆಫೀಸ್ ನಲ್ಲಿ ಇನ್ನಿಲ್ಲದಂತೆ ಸೋಲು ಕಂಡಿದೆ.
ಮೊದಲ ವಾರಂತ್ಯದಲ್ಲಿ ಸಿನಿಮಾ ಗಳಿಸಿದ್ದು ಕೇವಲ 3 ಕೋಟಿ ರೂ. ಇದುವರೆಗೆ ನಾಗಚೈತನ್ಯ ಸಿನಿಮಾ ಇಷ್ಟೊಂದು ಕಳಪೆ ಗಳಿಕೆ ಮಾಡಿದ್ದು ಇದೇ ಮೊದಲು. ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವುದು ಖಂಡಿತಾ. ಹೀಗೇ ಮುಂದುವರಿದರೆ ಮೆಗಾಸ್ಟಾರ್ ಚಿರಂಜೀವಿಯವರ ಆಚಾರ್ಯ ಸಿನಿಮಾದಂತೆ ಶೀಘ್ರದಲ್ಲೇ ಒಟಿಟಿಗೆ ಬರುವುದು ಖಂಡಿತಾ.