ಗುಡ್ ಬೈ ಹೇಳಿದ್ದ ರಶ್ಮಿಕಾ ಮತ್ತೆ ಬರಲಿದ್ದಾರೆ ಈ ದಿನ!
ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿರುವ ಬಗ್ಗೆ ರಶ್ಮಿಕಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದೆ.
ಗುಡ್ ಬೈ ಸಿನಿಮಾ ಅಕ್ಟೋಬರ್ 7 ರಂದು ತೆರೆಗೆ ಬರುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಗುಡ್ ಬೈ ಸಿನಿಮಾ ತಂಡದ ಜೊತೆಗಿನ ಫೋಟೋ ಹಂಚಿಕೊಂಡಿರುವ ರಶ್ಮಿಕಾ ರಿಲೀಸ್ ದಿನಾಂಕವನ್ನೂ ಖುಷಿಯಿಂದಲೇ ಪ್ರಕಟಿಸಿದ್ದಾರೆ.