ಯುವರತ್ನ ಟೀಸರ್ ನೋಡಿ ಅಚ್ಚರಿಗೊಳಗಾದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು
ಮಂಗಳವಾರ, 8 ಅಕ್ಟೋಬರ್ 2019 (09:16 IST)
ಬೆಂಗಳೂರು: ಇತ್ತೀಚೆಗೆ ಕನ್ನಡದಲ್ಲಿ ಮೂಡಿಬಂದ ಪೈಲ್ವಾನ್ ಸಿನಿಮಾ ಕುಸ್ತಿ ಆಟದ ಸುತ್ತ ಹೆಣೆದ ಕತೆಯಾಗಿತ್ತು. ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲೂ ಕ್ರೀಡೆಯ ಝಲಕ್ ಕಾಣಿಸುತ್ತಿದೆ.
ಯುವರತ್ನ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಪುನೀತ್ ಅವತಾರ ನೋಡಿ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಯಾಕೆಂದರೆ ಪುನೀತ್ ಇದರಲ್ಲಿ ರಗ್ಬಿ ಆಡುತ್ತಿರುವ ದೃಶ್ಯಗಳಿವೆ.
ಹೀಗಾಗಿ ಟೀಸರ್ ನೋಡಿದ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿದೆ. ಟೀಸರ್ ನೋಡಿದ ಪ್ರೇಕ್ಷಕರು ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಿದ್ದಾರೆ.