ಮಗಳು ಹುಟ್ಟಿದ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್!
ಈ ಸಂದರ್ಭದಲ್ಲಿ ಅವರಿಗೆ ಮತ್ತೆ ಯಶ್ ಜತೆಗೆ ನಟಿಸ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ‘ಖಂಡಿತಾ. ಅಂತಹದ್ದೊಂದು ಸ್ಕ್ರಿಪ್ಟ್ ಬಂದು ಅದಕ್ಕೆ ನಮ್ಮ ಅಗತ್ಯವಿದೆ ಎನಿಸಿದರೆ ನಟಿಸ್ತೀವಿ. ಇದುವರೆಗೆ ಹಲವು ಅಂತಹ ಆಫರ್ ಗಳು ಬಂದಿವೆ. ಆದರೆ ಕತೆ ಒಪ್ಪಿಗೆಯಾಗದೇ ಬೇಡ ಅಂತ ಬಿಟ್ಟಿದ್ದೀವಿ’ ಎಂದು ರಾಧಿಕಾ ಹೇಳಿದ್ದಾರೆ. ಆ ಮೂಲಕ ಮುಂದೊಂದು ದಿನ ಮತ್ತೆ ಯಶ್ ಜತೆಗೆ ತೆರೆ ಹಂಚಿಕೊಳ್ಳುವುದಾಗಿ ರಾಧಿಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.