ರಾಧಿಕಾ ಪಂಡಿತ್-ಯಶ್ ಮಗಳ ಮುಖ ಕೊನೆಗೂ ಬಹಿರಂಗ!
ಇದೀಗ ರಾಧಿಕಾ ಪಂಡಿತ್ ತಮ್ಮ ಮಗಳು ಅಪ್ಪ ಯಶ್ ಜತೆ ಆಡುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ಆದರೆ ಇದರಲ್ಲಿ ಮಗಳ ಮುಖ ಕಾಣುತ್ತಿಲ್ಲ. ಆದರೆ ನಿರಾಶರಾಗಬೇಕಿಲ್ಲ. ಮೇ 7 ರಂದು ಅಂದರೆ ಅಕ್ಷಯ ತೃತೀಯ ದಿನ ತಮ್ಮ ಮನೆಯ ಅಮೂಲ್ಯ ಬಂಗಾರವನ್ನು ನಿಮಗೆ ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮೇ 7 ರಂದು ರಾಧಿಕಾ ಪಂಡಿತ್ ಪ್ರಕಟಿಸುವ ರಾಕಿಂಗ್ ಮಗಳ ಫೋಟೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.