ಲೇಟ್ ನೈಟ್ ಪಾರ್ಟಿಗಳಿಂದಲೇ ಸಿಕ್ಕಿಬಿದ್ದ ರಾಗಿಣಿ

ಶನಿವಾರ, 5 ಸೆಪ್ಟಂಬರ್ 2020 (09:09 IST)
ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಲೇಟ್ ನೈಟ್ ಪಾರ್ಟಿಗಳೇ ಮುಳುವಾಯಿತು ಎನ್ನಬಹುದು.


ಆಪ್ತ ರವಿಶಂಕರ್ ತಪ್ಪೊಪ್ಪಿಗೆ ನಂತರ ರಾಗಿಣಿಗೆ ಕಂಟಕ ಎದುರಾಯ್ತು. ಲೇಟ್ ನೈಟ್ ಗಳಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗಳಿಗೆ ನನ್ನ ಜತೆ ರಾಗಿಣಿಯೂ ಪಾಲ್ಗೊಳ್ಳುತ್ತಿದ್ದರು ಎಂದು ರವಿಶಂಕರ್ ಬಾಯ್ಬಿಟ್ಟಿದ್ದ. ಅದಲ್ಲದೆ ರಾಗಿಣಿ ಸಾಕ್ಷ್ಯ ನಾಶಪಡಿಸಲು ಅನುಮಾನಸ್ಪದವಾಗಿ ನಡೆದುಕೊಂಡಿದ್ದರಿಂದ ಅನಿವಾರ್ಯವಾಗಿ ಪೊಲೀಸರು ರಾಗಿಣಿಯನ್ನು ಬಂಧಿಸಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ