ಮೋಹನ್ ಲಾಲ್ ಸಿನಿಮಾದಲ್ಲಿ ಅವಕಾಶ ಪಡೆದ ಕನ್ನಡ ನಟಿ ರಾಗಿಣಿ ದ್ವಿವೇದಿ

ಬುಧವಾರ, 26 ಜುಲೈ 2023 (08:40 IST)
ಬೆಂಗಳೂರು: ಕನ್ನಡ ನಟಿ ರಾಗಿಣಿ ದ್ವಿವೇದಿ ಈಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

ಕನ್ನಡದವರೇ ಆದ ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ‘ವೃಷಭ’ ಸಿನಿಮಾದಲ್ಲಿ ರಾಗಿಣಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದಿಗ್ಗಜರ ಕಲಾವಿದರ ದಂಡೇ ಇರಲಿದೆ.

ವಿಶೇಷವೆಂದರೆ ಇದಕ್ಕೆ ಮೊದಲು ಕಂದಹಾರ್ ಎನ್ನುವ ಸಿನಿಮಾದಲ್ಲಿ ರಾಗಿಣಿ ಸ್ಟಾರ್ ನಟ ಮೋಹನ್ ಲಾಲ್ ಜೊತೆ ಅಭಿನಯಿಸಿದ್ದರು. ಹೀಗಾಗಿ ಇದು ಅವರ ಎರಡನೇ ಸಿನಿಮಾ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ