ಬೆಂಗಳೂರು ಕಂಬಳದಲ್ಲಿ ರಕ್ಷಿತ್ ಶೆಟ್ಟಿ ಹುಲಿ ಡ್ಯಾನ್ಸ್

ಭಾನುವಾರ, 26 ನವೆಂಬರ್ 2023 (19:50 IST)
ಬೆಂಗಳೂರು: ಬೆಂಗಳೂರು ಕಂಬಳ ಉತ್ಸವಕ್ಕೆ ಇಂದು ತಾರೆಯರ ದಂಡೇ ಹರಿದುಬಂದಿತ್ತು. ಕರಾವಳಿ ಮೂಲದ ನಟ ರಕ್ಷಿತ್ ಶೆಟ್ಟಿ ಇಂದು ಬೆಂಗಳೂರು ಕಂಬಳದ ಮೆರುಗು ಹೆಚ್ಚಿಸಿದರು.

ಕಂಬಳ ವೀಕ್ಷಿಸಿದ ರಕ್ಷಿತ್ ಶೆಟ್ಟಿ ಬಳಿಕ ವೇದಿಕೆಯಲ್ಲಿ ಹುಲಿ ಡ್ಯಾನ್ಸ್ ಗೂ ಹೆಜ್ಜೆ ಹಾಕಿದರು. ಅಪರಾಹ್ನ ಕಂಬಳ ಉತ್ಸವಕ್ಕೆ ಬಂದ ರಕ್ಷಿತ್ ಶೆಟ್ಟಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಬಳಿಕ ಕರಾವಳಿಯ ಸಾಂಪ್ರದಾಯಿಕ ಹುಲಿ ನೃತ್ಯವನ್ನು ವೀಕ್ಷಿಸಿ ರಕ್ಷಿತ್ ಖುಷಿಪಟ್ಟರು. ಬಳಿಕ ವೇದಿಕೆಯಲ್ಲಿ ಹುಲಿ ನೃತ್ಯಕ್ಕೆ ತಾವೇ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದರು.

ಬಳಿಕ ಮಾತನಾಡಿದ ಅವರು ಹುಲಿ ಡ್ಯಾನ್ಸ್ ನನ್ನ ಮುಂದಿನ ಸಿನಿಮಾದಲ್ಲಿರುತ್ತದೆ ಎಂದಾಗ ನೆರೆದಿದ್ದವರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಬಳಿಕ ಸಪ್ತಾಗರದಾಚೆ ಎಲ್ಲೊ 2 ಸಿನಿಮಾ ನೋಡುವಂತೆ ಮನವಿ ಮಾಡಿ ವೇದಿಕೆಯಿಂದ ತೆರಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ