ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ
ದ್ರೌಪದಿ ರಾಷ್ಟ್ರಪತಿ ಆದರೆ ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು? ಎಂದು ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ಕೂಡಾ ದಾಖಲಾಗಿತ್ತು.
ಇದರ ಬೆನ್ನಲ್ಲೇ ಈಗ ತಮ್ಮ ಹೇಳಿಕೆ ವರ್ಮಾ ಸ್ಪಷ್ಟನೆ ನೀಡಿದ್ದಾರೆ. ನಾನು ಹೆಸರಿಗೆ ತಕ್ಕಂತೆ ಪಾಂಡವರು ಮತ್ತು ಕೌರವರ ಉಲ್ಲೇಖ ಮಾಡಿದೆ ಅಷ್ಟೇ ಹೊರತು ವೈಯಕ್ತಿಕವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ಅಲ್ಲ. ಮಹಾಭಾರತದ ಎಲ್ಲಾ ಪಾತ್ರಗಳು ನನ್ನ ಫೇವರಿಟ್. ಯಾರಿಗೂ ನೋವು ನೀಡುವ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.