ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಂದ ಉಚಿತ ಊಟದ ವ್ಯವಸ್ಥೆ

ಶುಕ್ರವಾರ, 3 ಏಪ್ರಿಲ್ 2020 (09:31 IST)
ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹಲವು ಬಾರಿ ವಿವಾದಕ್ಕೀಡಾಗಿದ್ದು ಇದೆ. ಆದರೆ ರಶ್ಮಿಕಾ ಈಗ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿದ್ದಾರೆ.


ರಶ್ಮಿಕಾ ಅಭಿಮಾನಿಗಳ ಬಳಗ ತುಮಕೂರು ಇವರು ಕೊರೋನಾದಿಂದಾಗಿ ಊಟ, ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾರೆ.

ತುಮಕೂರಿನ ಅಭಿಮಾನಿಗಳ ಬಳಗ ಅಗತ್ಯವಿದ್ದವರಿಗೆ ಊಟದ ವ್ಯವಸ್ಥೆ, ಇನ್ನುಳಿದವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ. ಅಭಿಮಾನಿಗಳ ಕೆಲಸಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ನನಗೆ ನಿಮ್ಮ ಕೆಲಸ ಎಷ್ಟು ಹೆಮ್ಮೆ ತಂದಿದೆ ಎಂದು ವರ್ಣಿಸಲೂ ಸಾಧ‍್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ